Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬೆಳಕಿನ ಹಬ್ಬದಲ್ಲಿ `ಪೆಟ್ರೋಮ್ಯಾಕ್ಸ್ಗೆ` ಚಾಲನೆ
Posted date: 05 Tue, Nov 2013 – 01:08:18 PM

ಬಿ ಪಾಸಿಟಿವ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಭಾಸ್ಕರ್ ಅವರು ನಿರ್ಮಿಸುತ್ತಿರುವ ‘ಪೆಟ್ರೋಮ್ಯಾಕ್ಸ್ ಚಿತ್ರ ಕನ್ನಡ ರಾಜ್ಯೋತ್ಸವ ಹಾಗೂ ಬೆಳಕಿನ ಹಬ್ಬದ ಸುಸಂದರ್ಭದಲ್ಲಿ ಆರಂಭವಾಯಿತು. ಬಸವನಗುಡಿಯ ದೊಡ್ದಗಣಪತಿ ದೇಗುಲದಲ್ಲಿ ನಡೆದ ಮುಹೂರ್ತ ಸಮಾರಂಭ ನೆರವೇರಿತು. ಪ್ರಥಮ ಸನ್ನಿವೇಶಕ್ಕೆ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಆರಂಭಫಲಕ ತೋರಿದರೆ ನವರಸ ನಾಯಕ ಜಗ್ಗೇಶ್ ಕ್ಯಾಮೆರಾ ಚಾಲನೆ ಮಾಡಿದರು.
   ‘ಸಿದ್ಲಿಂಗು, ‘ನೀರ್‌ದೋಸೆ ಚಿತ್ರದ ನಿರ್ದೇಶಕ ವಿಜಯಪ್ರಸಾದ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ನೀನಾಸಂ ಸತೀಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ. ಸುಜ಼್ಞಾನ್ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ಹೊಸ್ಮನೆಮೂರ್ತಿ ಕಲಾ ನಿರ್ದೇಶನವಿರುವ ಈ ಚಿತ್ರದ ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದೆ. ತಾರಾಬಳಗದ ಆಯ್ಕೆ ನಡೆಯುತ್ತಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೆಳಕಿನ ಹಬ್ಬದಲ್ಲಿ `ಪೆಟ್ರೋಮ್ಯಾಕ್ಸ್ಗೆ` ಚಾಲನೆ - Chitratara.com
Copyright 2009 chitratara.com Reproduction is forbidden unless authorized. All rights reserved.